YouTube ಕಾರ್ಯಾಚರಣೆಗಳ ಮಾರ್ಗದರ್ಶಿ

ನಿಮ್ಮ YouTube Analytics ಡೇಟಾವನ್ನು ಪರಿಶೀಲಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
YouTube Analytics ಅನ್ನು ಬಳಸಿಕೊಂಡು ನಿಮ್ಮ ವೀಡಿಯೊಗಳು, ಚಾನಲ್‌ಗಳು ಹಾಗೂ ಅಸೆಟ್‌ಗಳ ಕಾರ್ಯಕ್ಷಮತೆಯನ್ನು ನೀವು ಮೇಲ್ವಿಚಾರಣೆ ಮಾಡಬಹುದು. ಈ ಲೇಖನವು ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ಅತ್ಯಂತ ಉಪಯುಕ್ತವಾದ YouTube Analytics ನ ಮೆಟ್ರಿಕ್‌ಗಳು ಹಾಗೂ ಫೀಚರ್‌ಗಳನ್ನು ಹೈಲೈಟ್ ಮಾಡುತ್ತದೆ. YouTube Analytics ನಲ್ಲಿ ಡೇಟಾವನ್ನು ವೀಕ್ಷಿಸಲು ಸಾಧ್ಯವಾಗುವ ಮೊದಲು ಕೆಲವು ದಿನಗಳಷ್ಟು ವಿಳಂಬವಿರಬಹುದು ಎಂಬುದನ್ನು ನೆನಪಿಡಿ.

ನಿಮ್ಮ ಅಸೆಟ್‌ಗಳ ಕುರಿತಾದ ಡೇಟಾವನ್ನು ಪಡೆಯಿರಿ

ನಿಮ್ಮ ಅಸೆಟ್‌ಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಅಸೆಟ್ Analytics ತೋರಿಸುತ್ತದೆ. ಯಾವ ಅಸೆಟ್‌ಗಳು ಜನಪ್ರಿಯವಾಗುತ್ತಿವೆ ಎಂಬುದನ್ನು ನೀವು ನೋಡಬಹುದು, ಇತರ ಅಸೆಟ್‌ಗಳೊಂದಿಗೆ ಕಾರ್ಯಕ್ಷಮತೆಯನ್ನು ಹೋಲಿಸಬಹುದು ಮತ್ತು ಅಸೆಟ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿರುವ ಟಾಪ್ ವೀಡಿಯೊಗಳನ್ನು ಅನ್ವೇಷಿಸಬಹುದು. ಈ ಡೇಟಾ ಪ್ರತಿದಿನ ಲಭ್ಯವಿದೆ, ಆದರೆ ಕೆಲವು ದಿನಗಳ ವಿಳಂಬವನ್ನು ಹೊಂದಿರಬಹುದು. ನಿಮ್ಮ ಅಸೆಟ್‌ಗಳ ಕುರಿತಾದ ಡೇಟಾವನ್ನು ವೀಕ್ಷಿಸಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Analytics  ಎಂಬುದನ್ನು ಆಯ್ಕೆ ಮಾಡಿ.
  3. ಸಮಗ್ರ ನೋಟ ಟ್ಯಾಬ್‌ನಲ್ಲಿ, ಜನಪ್ರಿಯ ವಿಭಾಗಕ್ಕೆ ಹೋಗಿ. ಈ ವಿಭಾಗವು, ಕಳೆದ 7 ದಿನಗಳಲ್ಲಿ ಅತಿ ಹೆಚ್ಚು ಬದಲಾವಣೆಯಾದ ಡೇಟಾವನ್ನು ಹೊಂದಿರುವ ವೀಡಿಯೊಗಳು, ಚಾನಲ್‍ಗಳು ಹಾಗೂ ಅಸೆಟ್‌ಗಳನ್ನು ತೋರಿಸುತ್ತದೆ.
  4. ಅಸೆಟ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ:
    • ಒಂದು ಅಸೆಟ್‌ನ ಕುರಿತಾದ ಡೇಟಾವನ್ನು ಪಡೆಯಲು ಅದರ ಮೇಲೆ ಕ್ಲಿಕ್ ಮಾಡಿ.
    • ಒಂದು ಅಸೆಟ್‌ನ ಮೇಲೆ ಹೋವರ್ ಮಾಡಿ ಮತ್ತು ಕಳೆದ 7 ದಿನಗಳಲ್ಲಿ ಅಸೆಟ್‌ನ ಕಾರ್ಯಕ್ಷಮತೆಯನ್ನು, ಅದರ ಹಿಂದಿನ 7-ದಿನಗಳ ಅವಧಿಯ ಕಾರ್ಯಕ್ಷಮತೆಗೆ ಹೋಲಿಸಲು, ಹೋಲಿಕೆ ಮಾಡಿ  ಐಕಾನ್ ಅನ್ನು ಕ್ಲಿಕ್ ಮಾಡಿ.
ಒಂದು ಅಸೆಟ್‌ನ ಶೀರ್ಷಿಕೆ, ನಂತರ Analytics ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಅಸೆಟ್‌ಗಳ ಟ್ಯಾಬ್‌ನಿಂದಲೂ ನೀವು ಈ ಡೇಟಾವನ್ನು ಪಡೆಯಬಹುದು.
ವೀಕ್ಷಣೆಗಳ ಡೇಟಾವನ್ನು ನೋಡುವಾಗ, ನಿಮ್ಮ ಅಸೆಟ್ ಕಾರ್ಯಕ್ಷಮತೆಯ ವರದಿಗೆ ಹೋಲಿಸಿದಾಗ YouTube Analytics ನಲ್ಲಿ ನೀವು ವಿಭಿನ್ನ ಸಂಖ್ಯೆಗಳನ್ನು ನೋಡಬಹುದು. ಏಕೆಂದರೆ:
  • ಕಾರ್ಯಕ್ಷಮತೆಯ ವರದಿಗಳು ಹಕ್ಕು ಸ್ಥಾಪನೆ ಮಾಡಲಾದ ವೀಕ್ಷಣೆಗಳನ್ನು ಮಾತ್ರ ಲೆಕ್ಕ ಮಾಡುತ್ತವೆ.
  • YouTube Analytics, ಹಕ್ಕು ಸ್ಥಾಪನೆ ಮಾಡಿರದ, ಪಾಲುದಾರರು ಅಪ್‌ಲೋಡ್ ಮಾಡಿದ ವೀಕ್ಷಣೆಗಳು ಹಾಗೂ ಹಕ್ಕು ಸ್ಥಾಪನೆ ಮಾಡಿದ ವೀಕ್ಷಣೆಗಳನ್ನು ಲೆಕ್ಕ ಮಾಡುತ್ತದೆ

ನಿಮ್ಮ ಗಳಿಕೆಗಳ ಮೆಟ್ರಿಕ್‌ಗಳನ್ನು ವೀಕ್ಷಿಸಿ

ಅಂದಾಜಿಸಲಾದ ಗಳಿಕೆಗಳ ಡೇಟಾವನ್ನು ವೀಕ್ಷಿಸಲು Analytics  ಪುಟದಲ್ಲಿ, ಆದಾಯ ಟ್ಯಾಬ್ ಅನ್ನು ಕ್ಲಿಕ್ ಮಾಡಬಹುದು. ಇದನ್ನು ನೆನಪಿಡಿ:

  • YouTube Analytics ನಲ್ಲಿ, ಅಂದಾಜಿಸಲಾದ ಗಳಿಕೆಗಳನ್ನು ಪ್ರತಿ ದಿನ ಅಪ್‌ಡೇಟ್ ಮಾಡಲಾಗುತ್ತದೆ.
  • YouTube Analytics, ಅಂದಾಜಿಸಲಾದ ಗಳಿಕೆಗಳ ಡೇಟಾಕ್ಕಾಗಿ ಸುಮಾರು 2 ದಿನಗಳ ಡೇಟಾ ವಿಳಂಬವನ್ನು ಹೊಂದಿರುತ್ತದೆ.
  • YouTube Analytics ನಲ್ಲಿ, ಅಂದಾಜಿಸಲಾದ ಗಳಿಕೆಗಳ ಡೇಟಾ, ನೈಜ ಸಮಯದ ಅಮಾನ್ಯ ಚಟುವಟಿಕೆಯ ಅಡ್ಜಸ್ಟ್‌ಮೆಂಟ್‌ಗಳನ್ನು ಪ್ರತಿಬಿಂಬಿಸುವುದಿಲ್ಲ. ಡೌನ್‌ಲೋಡ್ ಮಾಡಬಹುದಾದ ಹಣಕಾಸು ವರದಿಗಳಲ್ಲಿ ವರದಿ ಮಾಡಲಾದ ಅಂತಿಮ ಆದಾಯವು YouTube Analytics ಡೇಟಾಕ್ಕಿಂತ ಭಿನ್ನವಾಗಿರಬಹುದು.

ಸುಧಾರಿತ ಮೋಡ್ ಅನ್ನು ಬಳಸಿ

YouTube Analytics ನ ಸುಧಾರಿತ ಮೋಡ್‌ನಲ್ಲಿ ನಿಮ್ಮ ಚಾನಲ್‌ಗಳು, ಅಸೆಟ್‌ಗಳು ಹಾಗೂ ಪ್ರೇಕ್ಷಕರ ಕುರಿತು ಹೆಚ್ಚು ನಿರ್ದಿಷ್ಟವಾದ ಡೇಟಾವನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ. ಕಂಟೆಂಟ್ ಕಾರ್ಯಕ್ಷಮತೆಯ ಮೆಟ್ರಿಕ್ಸ್ ಅನ್ನು ಸಹ ನೀವು ಹೋಲಿಸಬಹುದು ಮತ್ತು ನಿಮ್ಮ ಡೇಟಾವನ್ನು ರಫ್ತು ಮಾಡಬಹುದು. ಸುಧಾರಿತ ಮೋಡ್ ಅನ್ನು ಬಳಸಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Analytics  ಎಂಬುದನ್ನು ಆಯ್ಕೆ ಮಾಡಿ.
  3. ಮೇಲೆ ಬಲಮೂಲೆಯಲ್ಲಿ, ಸುಧಾರಿತ ಮೋಡ್ ಅನ್ನು ಕ್ಲಿಕ್ ಮಾಡಿ.
  4. ಈ ಪುಟದಲ್ಲಿ ನೀವು ಅನೇಕ ಕ್ರಮಗಳನ್ನು ಕೈಗೊಳ್ಳಬಹುದು, ಅವುಗಳ ಸ್ಥೂಲನೋಟವನ್ನು ಇಲ್ಲಿ ಕೊಡಲಾಗಿದೆ. ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗಾಗಿ, ಹೆಚ್ಚುವರಿ ಕ್ರಿಯೆಗಳಲ್ಲಿ ಇವು ಒಳಗೊಂಡಿವೆ:
    • ಪ್ರತ್ಯೇಕ ಚಾನಲ್‌ಗಳಿಂದ ಡೇಟಾವನ್ನು ವೀಕ್ಷಿಸಲು ಚಾನಲ್‌ಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
    • ಪ್ರತ್ಯೇಕ ಅಸೆಟ್‌ಗಳಿಂದ ಡೇಟಾವನ್ನು ವೀಕ್ಷಿಸಲು ಅಸೆಟ್‌ಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
    • ಚಾನಲ್ ಮಾಲೀಕತ್ವ ಅಥವಾ ಹಕ್ಕು ಸ್ಥಾಪನೆಯ ಸ್ಥಿತಿಯ ಪ್ರಕಾರ ಡೇಟಾವನ್ನು ವೀಕ್ಷಿಸಲು ಇನ್ನಷ್ಟು  ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ಯಾವುದೇ ಸುಧಾರಿತ ಮೋಡ್ ಪುಟದಲ್ಲಿ, ಡೇಟಾವನ್ನು ರಫ್ತು ಮಾಡಲು ಡೌನ್‌ಲೋಡ್ ಐಕಾನ್ ಅನ್ನು ಕ್ಲಿಕ್ ಮಾಡಬಹುದು. YouTube Analytics ನಲ್ಲಿ ಸುಧಾರಿತ ಮೋಡ್ ಅನ್ನು ಬಳಸುವ ಕುರಿತು ಇನ್ನಷ್ಟು ತಿಳಿಯಿರಿ.

Analytics ಗುಂಪುಗಳೊಂದಿಗೆ ಡೇಟಾವನ್ನು ವ್ಯವಸ್ಥಿತಗೊಳಿಸಿ

ಗುಂಪುಗಳು ಎಂದರೆ ನಿಮ್ಮ ವೀಡಿಯೊಗಳು, ಚಾನಲ್‌ಗಳು ಅಥವಾ ಅಸೆಟ್‌ಗಳ, ಕಸ್ಟಮೈಸ್ ಮಾಡಬಹುದಾದ ಸಂಗ್ರಹಗಳಾಗಿವೆ. ಗುಂಪುಗಳು, ಎಲ್ಲಾ ಡೇಟಾವನ್ನು ಒಂದೇ ಸ್ಥಳದಲ್ಲಿ ನೋಡುವುದಕ್ಕಾಗಿ ಒಂದೇ ರೀತಿಯ ಕಂಟೆಂಟ್ ಅನ್ನು ಒಟ್ಟಿಗೆ ಜೋಡಿಸಲು ಅವಕಾಶ ನೀಡುತ್ತವೆ, ಇದರಿಂದ ನೀವು ಕಾರ್ಯಕ್ಷಮತೆಯನ್ನು ವ್ಯವಸ್ಥಿತವಾದ ರೀತಿಯಲ್ಲಿ ಮೇಲ್ವಿಚಾರಣೆ ಮಾಡಲು ಸಹಾಯವಾಗುತ್ತದೆ.

Analytics ಗುಂಪುಗಳನ್ನು ರಚಿಸುವ ಮತ್ತು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

YouTube Analytics ಫೀಚರ್‌ಗಳು ಹಾಗೂ ಮೆಟ್ರಿಕ್‌ಗಳ ಕುರಿತಾದ ವಿವರವಾದ ಗೈಡ್‌ಗಾಗಿ, ಮುಖ್ಯ YouTube Analytics ಸಹಾಯ ಕೇಂದ್ರ ಪುಟಕ್ಕೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4426829866501864768
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false